Thursday, 30 August 2012

ಜೀವನ

ಜೀವನದ ಹಾದಿಯಲಿ
ಹಣ ಚಿನ್ನ ಗಳಿಸುವ ತವಕ
ಅದರ ಮೇಲಿನ ಅಸೆ
ಮಣ್ಣನು ಸೇರುವ ತನಕ

ಕವಿತೆ

ಕವಿತೆಯ ಸೊಬಗಿಗೆ
ತುಂಬುವುದು ಸೊಗಸು
ನವಿರಾಗಿ ಸೆಳೆದಾಗ
ಓದುಗನ ಮನಸು

Wednesday, 22 August 2012

ಪ್ರಕೃತಿ

ಪ್ರಾಣಿ ಪಕ್ಷಿಗಳ ಸಂಕುಲನ
ಮೂಡುವುದು ಆನಂದದ ಸಂಚಲನ
ಇದಾಗಿದೆ ಪ್ರಕೃತಿಯ ನಯನ
ಸುಂದರ ಸೊಬಗಿನ ಸಮ್ಮಿಲನ

ಪ್ರಕೃತಿಯ ಮಡಿಲಿನ ಉತ್ಖನನ
ಆಗುತಿರುವುದು ಪ್ರಕೃತಿಯ ಅಸಮತೋಲನ
ಆದರೆ ಮರಗಳ ಮಾರಣಹೋಮ
ಆಗುವನು ಮನುಜ ನಿರ್ನಾಮ

ಸ್ವಚ್ಛ ಸುಂದರ ಪ್ರಕೃತಿ
ಮಾಡುತ್ತಿರುವನು ಮನವ ವಿಕೃತಿ
ಹೀಗೆ ಮುಂದುವರಿದರೆ ಪರಿಸ್ಥಿತಿ
ಆಗುವುದು ಮನುಜನ ಅವನತಿ

ಬೆಂಗಳೂರು

ನಮ್ಮ ರಾಜಧಾನಿ ಬೆಂಗಳೂರು
ತಂತ್ರಜ್ಞಾನದಲ್ಲಿ ಮೇರು
ಸಮೃದ್ಧವಾದ ಊರು
ವಾಹನಗಳದ್ದೆ ಕಾರುಬಾರು

ಸುಂದರ ಉದ್ಯಾನನಗರಿ
ಆಕರ್ಷಣೆಗಳಿಂದ ಕೂಡಿದ ಸಿರಿ
ಬಜಾರುಗಳಿಲ್ಲಿದೆ ಹಲವು
ಧನಿಕರಿಗೆ ಇತ್ತ ಒಲವು

ಉದ್ಯೋಗಕ್ಕಿಲ್ಲ ಕೊರತೆ
ಜಾಣ್ಮೆಗಿಲ್ಲಿದೆ ಘನತೆ
ಸಿಗುತ್ತದೆ ಸಂಬಳ ಸಾವಿರಾರು
ಕದಿಯಲು ಕಳ್ಳರು ನೂರಾರು

ಶಿವಮೊಗ್ಗ

ಮಲೆನಾಡ ನಗರಿ ಶಿವಮೊಗ್ಗ
ತುಂಬಿಹುದು ಸು೦ದರ ನಿಸರ್ಗ
ಇಲ್ಲಿಹುದು ತು೦ಗೆಯ ಸಿರಿ
ಹೊಳಪನು ಬೀರುವ ಝರಿ

ಜಗದ್ವಿಖ್ಯಾತ ಜಲಪಾತ ಜೋಗ
ಮೂಡಿಸುವುದು ಜನರಲ್ಲಿ ಸೋಜಿಗ
ಶರವತಿಯ ವಿದ್ಯುತ್ ಸ್ಥಾವರ
ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ

ಸು೦ದರ ಆಗು೦ಬೆಯ ನೋಟ
ನೋಡುಗರ ಮನದಲ್ಲಿ ರಸದೂಟ
ಸೂರ್ಯೋದಯ ಸೂರ್ಯಾಸ್ತಗಳ ಸೊಬಗು
ನೀಗುವುದು ಮನಸಿನ ಕೊರಗು

Monday, 20 August 2012

ಮಳೆ

ಸೂರ್ಯನ ತಾಪದಿ
ಹೋಗುತ್ತಿರಲು ಭೂಮಿ ಸುಟ್ಟು
ಮಳೆಯ ಆಗಮನದಿ
ಸಿಕ್ಕಿತು ಇಳೆಗೆ ಮರು ಹುಟ್ಟು

ಸಂಜೆ

ನಿಸರ್ಗದ ಪಡುವಣದಿ
ಆಗುತಿರಲು ಸಂಜೆ
ದಣಿದ ಸೂರ್ಯನು ಕೇಳುವನು
ನನಗು ಬೇಕು ಸ್ವಲ್ಪ ರಜೆ